ಮೌನವೇ ಮಾತಾದಾಗ | kannada heart touching kavana

kannada heart touching kavana


Kannada kavanagalu by Aahok kunder


ಮೌನವೇ ಮಾತಾದಾಗ-kannada heart touching kavana




ತಟ್ಟನೆ ಕೂತ ಹಕ್ಕಿಯೂ ಗೆಲ್ಲುಗಳಲ್ಲಿ.. 
ಪಟ್ಟನೆ ಹಾರಿತು ಮರುಕ್ಷಣದಲ್ಲಿ.. 
ಸುಮ್ಮನೆ ನಾನು ಏಕಾಂತ ಪುಟಗಳ ತೆರೆಯಲು.. 
ಮುಂಜಾನೆ ಬಾನಲ್ಲಿ ನಸುನಗುವ ಕಿರಣವೂ ಕೂಗಿತು.. 

ನಾನಂದು ಎದೆಯೊಳಗಿರುವ ಬಿಕ್ಕಳಿಕೆಯ ಕಟ್ಟಿಸಲಿಲ್ಲ.. 
ಕಡಲಾಗಿ ಹರಿದ ಹನಿಯೆಲ್ಲವನು ನಾಚಿಕೆಗಾಗಿ ಬಿಂಬಿಸಲಿಲ್ಲ.. 
ಅವಮಾನಗಳು ಕಣ್ಣ ಮುಂದೆ ನಗುತ್ತಿರುವಂತೆ.. 
ಬರೆದೆ ನೀಲಿ ಶಾಯಿಗಳಿಂದು ಈ ನೆನೆಪುಗಳ ಬಂಧಿಸಲಿಲ್ಲ.. 

ಮುಗಿಲ ಮರೆಮಾಚಿದ ಗಗನ.. 
ಕನಸೊಳು ಕಂಡ ನನ್ನಲ್ಲೆಯ ನಯನ.. 
ಮೂರು ಮ್ಯೆಲಿ ಇಸ್ಕೂಲು ನಡೆದ ಪಯಾಣ.. 
ಒಂಟಿ ಬ್ಯಾಗು,  ಸುತ್ತಲೂ ಬಸ್ಸು ವಾಹನಗಳ ನರ್ತನ.. 

ಸ್ವರ್ಣೆಯಲಿ ಕಾಲಿಟ್ಟು ಈಜಾಡಿದ ನೆನಪುಗಳು.. 
ನಾಲ್ಕು ಗೋಡೆಗಳ ಮಧ್ಯೆ ಭಯದ ನೆರೆಳುಗಳು.. 
ಅಂಜಿಕೆಯ ಗೂಡಲಿ ಸೊರಗಿದ ಮಾತುಗಳು.. 
ಮುಂದೊಂದು ದಿನ ಎದುರಿಸುದಿತ್ತು ಬೆಟ್ಟದ ಸವಾಲುಗಳು.. 

ಅವಳೊಲುಮೆಯ ಬೆಂಗಾವಲು ಜ್ಯೋತಿಯಲ್ಲರಳಿತು.. 
ಓದಿದ ಕೋಶಗಳೆಲ್ಲವೂ ಕಗ್ಗತ್ತಲ ರಾತ್ರಿಯಲೊಂದಾದ ಬೆಳದಿಂಗಳಾಯಿತು.. 
ಮೌನವೇ ಮಾತಾದಾಗ ಎದೆಯೇ ಹಿಗ್ಗಿತು.. 
ದೂರದಲ್ಲೆಲ್ಲೊ ಗುನುಗಿದಂತ ಗಾನವೂ ಮನದ ಮೂಲೆ ಮೂಲೆಯಲ್ಲೂ ಹಾಡುತಿತ್ತು.. 

                                                                      

kannada heart touching kavana, kannada heart touching lines
Kannada heart touching kavana


Kannada heart touching kavana by Ashok kunder

For more feelings kavana pls subscribe to my channel 'ashok kunder kannada kavanagaluhttps://www.youtube.com/c/AshokKunderkannadakavanagalu' in youtube-

Thank u-

Kindly share this post as much as possible-
ಮೌನವೇ ಮಾತಾದಾಗ | kannada heart touching kavana ಮೌನವೇ ಮಾತಾದಾಗ | kannada heart touching kavana Reviewed by ASHOK KUNDER on 07:53 Rating: 5

No comments:

Powered by Blogger.