ಇಷ್ಟೆಲ್ಲಾ ಇಷ್ಟು ಬೇಗ ನಡೆಯಿತಾ..?- kannada feelings story
ಎರಡನೆಯ ಕ್ಲಾಸಿನಲ್ಲಿ ಪರೀಕ್ಷೆಯೇನೆಂದು ಗೊತ್ತಿರದೆ ಬೋರ್ಡನಲ್ಲಿ ಬರೆದ ಪ್ರಶ್ನೆಗಳನ್ನು ಮಾತ್ರ ಬರೆದು ಮಾಸ್ತರರಿಗೆ ಒಪ್ಪಿಸಿ ಸೊನ್ನೆ ಮಾರ್ಕ್ಸು ಗಳಿಸಿದ್ದು.
ನಾಲ್ಕನೆಯ ಕ್ಲಾಸಿನಲ್ಲಿ ಕಿಸೆಯಲ್ಲಿ ಬ್ಲೇಡು ಇಟ್ಟುಕೊಂಡ ನಾನು ಗೊತ್ತಿಲ್ಲದೆ ಇನ್ನೊಬ್ಬ ಗೆಳೆಯನ ಜೊತೆ ಆಟವಾಡುವಾಗ ಅವನ ಹೆಬ್ಬೆರೆಳ ಮಾಂಸ ಕಿತ್ತು ಹೋದಾಗ ಧಡೂತಿ ಮಾಸ್ತರು ನನ್ನ ಬೆನ್ನಿಗೆ ಚಂಡೆಬಾರಿಸಿದ್ದು..
5ನೆ ಕ್ಲಾಸಿನಲ್ಲಿ ಇಡಿ ತರಗತಿಯಲ್ಲಿ 'ಇವನು ಬರಿ ಪಾಪ' ಅನ್ನೊ ಬಿರುದು ಪಡೆದಿದ್ದು..
6ನೆ ಕ್ಲಾಸಿನಲ್ಲಿ ಗಣಿತದಲ್ಲಿ ಪಾಸು ಮಾಡಿಕೋಂಡ ಮೂರು ನಾಲ್ಕು ವಿಧ್ಯಾರ್ಥಿಗಳಲ್ಲಿ ನಾನು ಒಬ್ಬನಾಗಿದ್ದು..
7ನೆ ಕ್ಲಾಸಿನಲ್ಲಿ 'ಹಣ ಮೇಲೊ ಗುಣ ಮೇಲೊ' ಭಾಷಣ ಮಾಡಲು ನಾನು ನಡುಗುವ ಕಾಲಲ್ಲೆ ಸ್ಟೇಜ್ ಹತ್ತಿ ಪಟ ಪಟ ಓದಿ ಮುಗಿಸಿ ಕೆಳಗೆ ಬಂದಿದ್ದು..
8ನೆ ಕ್ಲಾಸಿನಲ್ಲಿ ಅದುವರೆಗೂ ಬೋರ್ಡ್ ಮೇಲೆ ಕಾಣಿಸದ ಅಕ್ಷರವನ್ನು ಪಕ್ಕದಲ್ಲಿರುವ ಸಹಪಾಠಿಯ ಪುಸ್ತಕ ನೋಡಿ ಬರೆಯುತ್ತಿದ್ದ ನನ್ನ ಅವಸ್ಥೆ ಕಂಡು ಟೀಚರಮ್ಮ ದೃಷ್ಟಿ ಸಮಸ್ಯೆಯ ವಿಷಯ ಮನೆಯ ತಿಳಿಸಿನಂತರದಲ್ಲಿ ದಪ್ಪ ಕನ್ನಡಕ ನನ್ನ ಕಣ್ಣು ಅಲಂಕರಿಸಿದ್ದು..
9ನೆ ಕ್ಲಾಸಿನಲ್ಲಿ ಕೊನೆಯ ಪರೀಕ್ಷೆಯ ಉತ್ತರವನ್ನು ಇನ್ನೊಬ್ಬ ಸ್ನೇಹಿತನಿಗೆ ತೋರಿಸಿದ ಪರಿಣಾಮ ಸಿಕ್ಕಿಬಿದ್ದು ಅವಮಾನಗೊಂಡ ನನ್ನ ಭವಿಷ್ಯದ ಕಣ್ಣಾಲಿಯ ನೀರು ಧಾರಕಾರವಾಗಿ ಹೊಮ್ಮಿದ್ದು..
10 ಕ್ಲಾಸಿನಲ್ಲಿ ಅದುವರೆಗೂ ಡಿ ಸೆಕ್ಷೆನ್ ಇದ್ದ ನಾನು ಹಠತ್ತಾಗಿ ಬಿ ಸೆಕ್ಷೆನ್ ಗೆ ವಾರ್ಗಾವಣೆಗೊಂಡು ಆಲ್ಲಿನ ಹೊಸ ವಿಧ್ಯಾರ್ಥಿಗಳ ಮುಖದರ್ಶನವಾದದ್ದು..
1 ಪಿ ಯು ಸಿ ಯಲ್ಲಿ ಇಂಗ್ಲಿಷ್ ಮೀಡ್ಯಮ್ನಿಂದ ಬಂದ ಮೂರು ನಾಲ್ಕು ಹುಡುಗಿಯರು ಮಧ್ಯಾಹ್ನ ಊಟ ಮುಗಿಸಿ ಅದೇನೋ ಚಾಲೆಂಜಿಗ್ ಆಟ ಅಂತ ನನ್ನ ಟಾರ್ಗೆಟ್ ಮಾಡಿ ಅವರಳೊಬ್ಬ ಹುಡುಗಿ ಬಂದುನನ್ನ ಹಿಂದೆ ಶರ್ಟ್ ಎಳೆದದ್ದು..ನಾನು ತುಟಿ ಬಿಚ್ಚದೆ ಗಪ್ ಚುಪ್ ಅನ್ನದಿದ್ದು ಕಂಡು ಸಂಜೆ ಬಂದು ಸ್ಸಾರಿ ಕೇಳಿದ್ದು..
2 ಪಿ ಯು ಸಿ ಯಲ್ಲಿ ರೋಲ್ ನಂಬರ್ ಪ್ರಕಾರ ಒಬ್ಬಬ್ಬರು ಏನೊ ಟಾಪಿಕ್ ಇಟ್ಕೊಂಡು ಇಂಗ್ಲಿಷನಲ್ಲಿ ಮಾತಾಡಬೇಕೆಂದಾಗ ಮೊದಲ ಸರದಿಯಂತೆ ನಾನು ಎಲ್ಲಿಂದಲೊ ಟಾಪಿಕ್ ಪಡ್ಕೊಂಡು ಬಾಯಿಪಾಠಮಾಡಿ ಸ್ಟೇಜ್ ಮೇಲೆ ಹತ್ತಿದಾಗ ಸಭಾಕಂಪನದ ಭೂತ ಮ್ಯೆಮೇಲೆ ಆವರಿಸಿದ್ದು..
ಮುಂದೇನು ಅನ್ನೋ ಗೊಂದಲದ ನಡುವೆ ಡಿಗ್ರಿ ಸೇರಲು ಬೇಕಾಗಿದ್ದ 5000 ಸಮಯಕ್ಕೆ ಸರಿಯಾಗಿ ನೆರೆಮನೆ ಬಾಯಮ್ಮ ಸಾಲ ಕೊಟ್ಟಿದ್ದು..
ಕಾಲೇಜ್ ಸೇರಿದ ಮೂರೆ ತಿಂಗಳಲ್ಲಿ ನನ್ನ ತಂದೆಯನ್ನು ಕಳೆದುಕೊಂಡಿದ್ದು..
2 ಡಿಗ್ರಿಯಲ್ಲಿ ಕೊನೆಯ ಸೆಮಿಸ್ಟರ್ ಪರೀಕ್ಷೆಯ ಸಮಯದಲ್ಲೆ ಅಕ್ಕನ ಮದುವೆ ನಡೆದಿದ್ದು..
3 ಡಿಗ್ರಿಯಲ್ಲಿ ಗೆಳೆಯರ ಜೋತೆ ಅಂಗಡಿ ಹೋದಾಗ ಅವರು ಕೊಂಡು ತಿಂದ ಪಪ್ಸು ಕೂಡ ನನ್ನ ಖಾಲಿ ಜೇಬು ಕಂಡು ನಗುತ್ತಿದ್ದದ್ದು..
ಕಾಲೇಜು ಜೀವನ ಮುಗಿದ ನನ್ನ ಬಾಳ ಹಾದಿಗೆ ದುಡಿಮೆಯ ನಂಟು ಒದಗಿಸಿದ 'ಸುಂಕೇರಿ ಟ್ರೇಡರ್' ಬ್ರಹ್ಮವರ ಕೊಟ್ಟಿದ್ದು 2500..ನನ್ನ ಮೊದಲ ಸಂಬಳದ ಅನುಭವ ಆ ಕ್ಷಣದಲ್ಲೆ ಗಿಟ್ಟಿಸಿದ್ದು..
'ಸಿ. ಎ ಕಛೇರಿ ಪ್ರವೇಶಿಸಿದ ನಂತರದ ಹಾದಿಯು ನನ್ನ ವ್ಯಕ್ತಿತ್ವಕ್ಕೊಂದು ಹೊಸ ತಿರುವು ಆ ಗೆಳತಿಯೆ ಕೊಟ್ಟಿದ್ದು..
ವಾಚಿಲ್ಲದ ನನ್ನ ಖ್ಹಾಲಿ ಕ್ಯೆಗೆ ಗೊಲ್ಡನ್ ಮನಸ್ಸಿಂದ ಅವಳು ವಾಚ್ ಕೊಟ್ಟಿದ್ದು..
ಕೆಲಸದ ವಿಚಾರದಲ್ಲಿ ಅದೇನೊ ತಪ್ಪು ನಡೆದಾಗ ಅವಳು ಬ್ಯೆದದ್ದು..ನನ್ನ ಕಣ್ಣಂಚಲ್ಲಿ ನೀರು ಸುಳಿದಿದ್ದು.." ಹುಡುಗರು ಅಳುವುದು ನನಗಿಷ್ಟವಿಲ್ಲ" ಅಂದಾಗ ನನ್ನೊಳಗೆ ತಳಮಳವಾಗಿದ್ದು.."ಹುಡುಗಿಯಾಗಿನಾನು ತಲೆಯೆತ್ತಿ ಮಾತಾಡುತ್ತಿನಿ, ನಿನಗ್ಯಾಕಾಗಲ್ಲ" ಅನ್ನೊ ಅರಿವು ಮೂಡಿಸಿದ್ದು...ಅವಳು ಕಛೇರಿ ಬಿಡುವ ಸಮಯದಲ್ಲಿ ನಾನು ಸಣ್ಣ ಗಿಫ್ಟ್ ಕೊಟ್ಟಿದ್ದು..
ನೆನಪಿನಂಚಿನಲ್ಲಿ ಬಿಟ್ಟು ಹಾಗೆ ಬಂದು ಹೋದವರ ಲೆಕ್ಕಿಸದೆ ನನ್ನ ಪಾಡಿಗೆ ನಾನುರುವ ಈ ಕ್ಷಣವು ಅನಿಸುತ್ತಿದೆ ಕಡಲ ತೀರದ ನುಣುಪು ಮರಳ ಸಣ್ಣ ಕಣದಂತೆ ನನ್ನ ಜೀವನದ ಸ್ವಾರಸ್ಯವು ಲಘುವಾಗಿದೆ..
ಆದರೂ ಇಷ್ಟೆಲ್ಲಾ ಇಷ್ಟು ಬೇಗ ನಡೆಯಿತಾ..?
Kannada feelings story |
Kannada feelings story by Ashok kunder-
Thank u-
This post is about to kannada feelings stories.
For more feelings vedios subscribe to my youtube channel- "Ashok kunder kannada kavanagalu"
Thank u-
ಇಷ್ಟೆಲ್ಲಾ ಇಷ್ಟು ಬೇಗ ನಡೆಯಿತಾ..? | kannada feelings story
Reviewed by ASHOK KUNDER
on
09:15
Rating:
Superrrr ashu anna...
ReplyDeleteThank u sis
Delete